ಆಳಂದ ವಿಧಾನಸಭಾ ಕ್ಷೇತ್ರವು (ಕ್ಷೇತ್ರ ಸಂಖ್ಯೆ-೪೬) ಭಾರತದ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿದ್ದು ಬೀದರ್ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. == ರಾಜಕೀಯ ಇತಿಹಾಸ == ಆಳಂದ ವಿಧಾನಸಭಾ ಕ್ಷೇತ್ರವನ್ನು ಇದುವರೆಗೆ ೧೫ ಮಂದಿ ಶಾಸಕರು ಪ್ರತಿನಿಧಿಸಿದ್ದಾರೆ. ಇವರಲ್ಲಿ ಅತೀ ಹೆಚ್ಚು ಬಾರಿ ಅಂದರೆ ೭ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ೩ ಬಾರಿ ಜನತಾದಳ, ೨ ಬಾರಿ ಜನತಾ ಪಕ್ಷ, ಮತ್ತು ಪಿ ಎಸ್ ಪಿ, ಕೆಜೆಪಿ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ೧ ಬಾರಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕದ ಏಕೀಕರಣವಾಗುವ ಮುನ್ನ ನಡೆದ ಚುನಾವಣೆ ಸಂದರ್ಭದಲ್ಲಿ(೧೯೫೭ ಮತ್ತು ೧೯೬೨) ಆಳಂದ ಎಸ್ ಸಿ ಮೀಸಲು ಕ್ಷೇತ್ರವಾಗಿತ್ತು. ೧೯೭೮ರಲ್ಲಿ ಕ್ಷೇತ್ರದ ಮರುವಿಂಗಡಣೆ ಆದ ನಂತರ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. == ಮತದಾರರು == == ಚುನಾವಣಾ ಇತಿಹಾಸ == === ಹೈದರಾಬಾದ್ ರಾಜ್ಯ === 1951: ವೀರೇಂದ್ರ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ === ಮೈಸೂರು ರಾಜ್ಯ === 1957 (ಸೀಟು-1): ಚಂದ್ರಶೇಖರ ಎಸ್ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957 (ಸೀಟು-2): ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ದೇವಪ್ಪ ಶಾಮಣ್ಣ ಹೊದಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ದೇವಪ್ಪ ಶಾಮಣ್ಣ ಹೊಡಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1972: ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ == ಚುನಾವಣಾ ಫಲಿತಾಂಶಗಳು == ಮೂಲ: == ಇವನ್ನೂ ಓದಿ == ಕಲಬುರಗಿ ಜಿಲ್ಲೆ ಆಳಂದ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳು == ಉಲ್ಲೇಖಗಳು ==